ಕೃಷಿ ತಾಪಂಡ ಬಿಚ್ಚಿಟ್ಟ ತನ್ನ ಜೀವನದ ಒಂದು ದೊಡ್ಡ ರಹಸ್ಯ | Filmibeat Kannada

2018-01-04 1

Bigg Boss Kannada 5: Week 12: Krishi Thapanda reveals her biggest secret of her life. Along with this, Krishi says, if 1 Lakh is given to her every week, she is ready to wash vessels also. Watch Video to know more.


'ಬಿಗ್ ಬಾಸ್' ಕಾರ್ಯಕ್ರಮದಿಂದ ಹೊರ ಬಂದ್ಮೇಲೆ, ಚಿತ್ರರಂಗದಲ್ಲಿ ಅವಕಾಶಗಳು ಜಾಸ್ತಿ ಆಗುತ್ತದೆ ಎಂಬ ಮಾತಿದೆ. ಈಗಿನ್ನೂ ಸ್ಯಾಂಡಲ್ ವುಡ್ ನಲ್ಲಿ ಅಂಬೆಗಾಲಿಡುತ್ತಿರುವ 'ಕೊಡಗಿನ ಬೆಡಗಿ' ನಟಿ ಕೃಷಿ ತಾಪಂಡಗೆ ಬಣ್ಣದ ಬದುಕಿನಲ್ಲಿ ಬೆಳೆಯಬೇಕು ಎಂಬ ಆಸೆ ಇದೆ. ಅದಕ್ಕಿಂತ ಹೆಚ್ಚಾಗಿ 'ಇಷ್ಟು' ಸಂಬಳ ಕೊಟ್ಟುಬಿಟ್ಟರೆ ಪಾತ್ರೆ ತೊಳೆದುಕೊಂಡು ಹಾಯಾಗಿ ಇದ್ದು ಬಿಡ್ತಾರಂತೆ ನಟಿ ಕೃಷಿ ತಾಪಂಡ. ಇದೇನಪ್ಪಾ ಹೀಗೆ ಅಂತ ಕನ್ಫ್ಯೂಸ್ ಆದ್ರಾ.? ''ಒಂದು ಲಕ್ಷ ಸಂಬಳ ಕೊಟ್ಟರೆ, ಪಾತ್ರೆ ತೊಳೆದುಕೊಂಡು ಇದ್ದು ಬಿಡುತ್ತೇನೆ'' ಎಂದು ಸ್ವತಃ ನಟಿ ಕೃಷಿ ತಾಪಂಡ 'ಬಿಗ್ ಬಾಸ್' ಮನೆಯಲ್ಲಿಯೇ ಹೇಳಿಕೊಂಡಿದ್ದಾರೆ. ''ನಮ್ಮನ್ನ ಕೆಲಸಕ್ಕೆ ಇಟ್ಟುಕೊಂಡು ತಿಂಗಳಿಗೆ ಒಂದು ಲಕ್ಷ ಕೊಟ್ಟರೆ ಪಾತ್ರೆ ತೊಳೆದುಕೊಂಡು ಇರುತ್ತೇನೆ'' ಎಂದು ನಗುನಗುತ್ತಾ ಕೃಷಿ ಹೇಳಿದಾಗ, ''ಒಂದು ಲಕ್ಷ ಅಷ್ಟೇನಾ'' ಅಂತ ಅನುಪಮಾ ಕೇಳಿದರು. ಆಗ ''ಒಂದು ವಾರಕ್ಕೆ ಒಂದು ಲಕ್ಷ ಕೊಟ್ಟರೆ ಸಾಕು'' ಎಂದುಬಿಟ್ಟರು ನಟಿ ಕೃಷಿ ತಾಪಂಡ.